ನನ್ನ ಹಾಸ್ಟೆಲಿನ ದಿನಗಳು ನೆನಪಾಗುತ್ತಿವೆ. ಏಳು ವರ್ಷಗಳ ಕೆಳಗೆ ಪದವಿಗಾಗಿ ಓದಲು ಹಾಸ್ಟೆಲಿಗೆ ಸೇರಿಕೊಂಡದ್ದು. ಬೆಂಗಳೂರಿಗೆ ಬಂದುಬಿಡಬೇಕೆಂಬ ಒತ್ತಡವಿತ್ತು. ಅಂದಿನಿದಲೇ ರಾಶಿ-ರಾಶಿ ನೆನಪುಗಳು ಜೋಡಣೆಯಾಗುತ್ತಾ ಹೋದದ್ದು. ಈ ಏಳು ವರ್ಷಗಳು ರೆಪ್ಪೆ ಮುಚ್ಚಿ ತೆರೆದಷ್ಟು ವೇಗವಾಗಿ ಮಾಯವಾಗಿವೆ. ಅದರಲ್ಲೂ ಹಾಸ್ಟೆಲಿನಲ್ಲಿದ್ದ ಮೂರು ವರ್ಷಗಳು ಹೋದದ್ದೇ ತಿಳಿಯಲಿಲ್ಲ. ಜೀವನದಲ್ಲಿ ಒಮ್ಮೆಯಾದರು ಅಂತಹ ಅನುಭವವನ್ನು ನಮ್ಮದಾಗಿಸಿಕೊಳ್ಳಬೇಕು.
ನನ್ನ ದಿನಚರಿ ಪ್ರಾರಂಭವಾಗುತ್ತಿದ್ದುದೇ ಬೆಳಗ್ಗೆ ಏಳು ಗಂಟೆಗೆ. ಅಷ್ಟರಲ್ಲಾಗಲೇ ಕೆಲವರು ಕಾಲೇಜಿನಲ್ಲಿರುತ್ತಿದ್ದರು !!
ನಾನು ಎದ್ದವನೇ ಮುಖಕ್ಕೆ ನೀರು ತೋರಿಸಿ ರೂಮಿನೆದುರಿನ ಗೋಡೆಯ ಮೇಲೆ ಕೂತು ಮೃದುವಾಗಿ ಚುರುಗುಟ್ಟುವ ಸೂರ್ಯನನ್ನು ನೋಡುತ್ತಾ ದೊಡ್ಡ ಲೋಟದಷ್ಟು ಕಾಫಿಯನ್ನು ಗುಟುಕರಿಸಿದರೆ.... ಅಂದಿನ ದಿನವೆಲ್ಲಾ ಬಣ್ಣ ಬಳಿದುಕೊಂಡುಬಿಡುತ್ತಿತ್ತು.
ನಾನು ಅಲ್ಲಿ ಪಡೆದ ಜೀವನಾನುಭವ ನನ್ನ ಜೀವನದ ಪ್ರತಿ ಹೆಜ್ಜೆಯನ್ನೂ ನಿರ್ದೆಶಿಸುತ್ತಿದೆ. ಅಲ್ಲಿ ನಾ ಕಂಡಂತಹ ವಿಚಿತ್ರ ವ್ಯಕ್ತಿತ್ವಗಳನ್ನು ಮತ್ತೆಲ್ಲಿಯೂ ಕಂಡಿಲ್ಲವೆಂದರೆ ನಂಬಲೇಬೇಕು. ಆ ನೆನಪುಗಳೆಲ್ಲ ಒಟ್ಟಿಗೇ ಒತ್ತರಿಸಿ ಬಂದಾಗ ಲಕ್ಷ್ಮಣರಾಯರ
"ಈಗೇಕೆ ಆ ನೆನಪು " ಕವಿತೆಯ ಸಾಲು ಕಿವಿಯಲ್ಲಿ ಅನುರಣಿಸುತ್ತದೆ. ಅಶ್ವಥ್ ರವರು ಸೊಗಸಾದ ಸಂಗೀತ ಕೊಟ್ಟು ಹಾಡಿದ್ದಾರೆ.
ಕೇಳಿರದಿದ್ದರೆ ಒಮ್ಮೆ ಕೇಳಿ.
ಪವಿ,
ReplyDeleteನೀವು ಹೇಳುವುದು ನಿಜ. ಹಾಸ್ಟೆಲ್ ದಿನಗಳು ಮಧುರ ದಿನಗಳು!